ಕುಲುಕುವ ಚಳಿಗೆ
ಕದ ತೆರೆದು ಹೊರಬಂದೆ
ಆಹಾ ಅವುಗಳು
ದಾರಿಯುದ್ಧಕ್ಕೂ ಚಿತ್ರ ಬರೆದಿದ್ದವು
ಬಣ್ಣ ಬಣ್ಣದ ಅಲಂಕಾರವು
ನನ್ನ ವಿಜೃಂಭಣೆಯಿಂದ ಸ್ವಾಗತಹಿಸಿದಂತಾಯಿತು
ಬೆತ್ತಲಾಗಿದ್ದ ಕೊಂಬೆಗಳು
ತಂಪು ಗಾಳಿಗೆ ಮೈಯೊಡ್ಡಿ
ಆಲಂಗಿಸುತ್ತಾ ಓಲಾಡುತ್ತಿದ್ದವು
ಅವುಗಳು ಬರೆದ ಚಿತ್ರದಲ್ಲಿನ
ಕೆಲವು ಬಣ್ಣಗಳನ್ನು ನನ್ನ
ನೆನಪಿಗಾಗಿ ನಾನು ತೆಗೆದಿಟ್ಟೆ
ಜೋಪಾನವಾಗಿ
-DPC
Comments
Post a Comment