ನೆನಪುಗಳು ಮಾತ್ರ
PC - Google
ನಿಮಗೆ ಇದರಲ್ಲಿ ಯಾವೆಲ್ಲಾ ನೆನಪುಗಳು ಪ್ರಿಯ
ಎಲ್ಲಿಗೆ ಪಯಣ
ಕೇಳಿತು ಪುಟ್ಟ ಮನೆಯ ಬಾಗಿಲು
ಸೋರುವ ಮನೆಯಲ್ಲಿ ಪ್ರೀತಿಗೆ ಇರಲಿಲ್ಲ ಕೊರತೆ
ಇನ್ನೆಲ್ಲೂ ಸಿಗದ ಒಲೆಯಲ್ಲಿ ಬೆಂಧ ಅನ್ನದ ರುಚಿ
ಜಗಳದ ನಡುವೆಯೂ ಹಂಚಿ ತಿನ್ನುವ ಅಣ್ಣ ತಮ್ಮ ಅಕ್ಕ ತಮ್ಮಂದಿರ ಸ್ನೇಹ
ಆಪಾರ ಸಿಹಿ ಕಹಿ ನೆನಪುಗಳ ಭಂಡಾರ
ತಂಪು ನೆಲದಲ್ಲಿನ ಸುಖ ನಿದ್ದೆ
ಏಣಿ ಏರಿ ಅಟ್ಟದ ಮೇಲಿನ ಕಥೆಗಳು
ಗುಡುಗು ಮಿಂಚಿನ ಭಯದಲ್ಲಿ ಅವಿತು ಕೂತ ಮೂಲೆಗಳು
ಮೊದಲು ಮನೆಗೆ ಬಂದ ಮರಿ ಬೆಕ್ಕು ಮರಿ ನಾಯಿ ನೆನಪುಗಳು
ಮಾವಿನಹಣ್ಣು ಬೀಜ ನೆಟ್ಟು ಬೆಳೆದ ಗಿಡ
ರಾಟೆ ಕಟ್ಟಿ ನೀರು ಸೇದಿದ ಭಾವಿ
ಮನೆ ಅಂಗಳದಲ್ಲಿನ ಸಣ್ಣ ತೆಂಗಿನ ಸಸಿ
ಬಗೆ ಬಗೆ ಅಡುಗೆ ಆಟಗಳು
ಮಣ್ಣಿನ ಆಟಗಳು
ತೋಡಿನಲ್ಲಿ ಹಿಡಿದ ಡೈಮಂಡ್ ಮೀನು
ಅಂಗಳದಲ್ಲಿನ ದೀಪಾವಳಿ ಪಟಾಕಿ
ಕ್ರಿಸ್ಮಸ್ ಸ್ಟಾರ್-ಗೊಧಲಿ
ಅಡುಗೆ ಕೋಣೆ ಯ ಕಪ್ಪು ಮಸಿ
ಆಕಾರ ಕಳೆದ ಹಳೆಯ ಅಲ್ಲುಮಿನಿಯಂ ಕೊಡಪಾನ
ರಜೆ ಮುಗಿಸಿ ಹಾಸ್ಟೆಲ್ ಮರಳುವ ದುಃಖ
ಅಜ್ಜಿ ಮನೆಗೆ ಹೊರಡುವ ಉತ್ಸಾಹ
ಪವರ್ ಕಟ್ ಟೈಮ್
ರಾತ್ರಿ ಹೊರರ್ ಸ್ಟೋರೀಸ್
ನೀಲಿ ಬಿಳಿ ಯುನಿಫಾರ್ಮ್
ಕಳ್ಳ ಪೊಲೀಸ್, ಲೂಡ ಆಟಗಳು..
ಬಲಿಷ್ಠ ಗೋಡೆಗಳ ಹೊಸ ಮನೆಯಲ್ಲಿ
ಕಳೆದು ಹೋದ
ಹಳೆಯ ಕ್ಷಣಗಳ ನೆನಪುಗಳಷ್ಟೇ ಸುಂದರ
- Dpc
This comment has been removed by the author.
ReplyDelete