ಕೇಳುವಿರಾ ಕೊಡಪಾನದ ಕಥೆ
ನೆನಪುಗಳ ಗುಚ್ಛದಿಂದ, ಟೈo ಎಂದು ಸದ್ದು ಮಾಡಿ ನನ್ನನ್ನು ಸ್ವಲ್ಪ ಆ ಕಾಲಕ್ಕೆ ಕರೆದಿದ್ದು ಈ ಸಲ ಹಳೆಯ ಗೆಳೆಯ ನನ್ನ ಆಲೂಮಿನಿಯಂ ಕೊಡಪಾನ. ನಿನ್ನೊಂದಿಗೆ ಕಳೆದ ಆ ದಿನಗಳು ಇನ್ನು ಸಿಗಲಾರವು ಎಂದು ಅನ್ನಿಸಿಯೇ ಇರಲಿಲ್ಲ. ಅಮ್ಮನೊಂದಿಗೆ ಬಾವಿ ಕಟ್ಟೆಯ ಕಡೆ ಹೋದ ಅಂದಿನ ನಮ್ಮ ಬಾಲ್ಯದ ಕ್ಷಣಗಳಲ್ಲಿ ನೀನೂ ಇದ್ದೆ ಜೊತೆಗೆ. ಕೊರಳಿಗೆ ಹಗ್ಗ ಬಿಗಿದು ಬಾವಿಗೆ ತಳ್ಳಿ, ಬರುವಾಗ ತುಂಬಿ ತುಳುಕುತ್ತಿದ್ದೆ, ಎರಡು ಕೈಯಿಂದ ನಿನ್ನನ್ನು ಮೇಲೆತ್ತುವ ಸಾಹಸ ಇತ್ತು, ನಾನು ನನ್ನ ತಮ್ಮನು ಸೇರಿ, ಕೆಲವೊಮ್ಮೆ ನಿನ್ನ ಪರಿಚಯದ ಗೆಳೆಯ ಗೆಳತಿ ಬಾವಿ ಮೀನುಗಳನ್ನು ಒಟ್ಟಿಗೆ ಕರೆತಂದು ನಮಗೆ ಪರಿಚಯಿಸುತ್ತಿದ್ದೆ, ಅಮ್ಮನ ಪ್ರೀತಿಯವ ಆಗಿದ್ದರಿಂದ, ಬಾವಿಗೆ ಇಳಿಸುವಾಗ ನಿನ್ನ ಮುಖ ಮೈ ಜಜ್ಜಿದರೆ ನಮಗೆ ಬೈಗಳು ಸಿಗುತ್ತಿದ್ದವು, ಹೊತ್ತು ತರುವಾಗ ಜಂಬದಿಂದ ಬೀಗಿ ಕುಣಿದು ಒದ್ದೆ ಮಾಡಿಸುತ್ತಿದ್ದೆ ನಮ್ಮನು ಕೂಡ. ನಿನಗೂ ತಮ್ಮ, ತಂಗಿಯರಿದ್ದರು. ಸೊಂಟದಿಂದ ಇಳಿಸಿ ಹಳೆಯ ಜಗಲಿಯ ಕಾವಿ ನೆಲದ ಮೇಲಿರಿಸಿದಾಗ ನೆಲದ ಹೊಯಿಗೆ ಜತೆ ಕೂಡಿ ಚೀವ್ ಎಂದು ಅಳುವ ಸದ್ದು ಈಗಲೂ ಕಿವಿಗೆ ಕೇಳಿದಂತಾಗುತ್ತಿದೆ ಎಲ್ಲೋ. ನಿನು ನೀರಿತ್ತು ಪೋಷಿಸಿದ ತೆoಗುಗಳು ಇಂದು ಬೆಳೆದು ನಿಂತಿವೆ ಎತ್ತರಕ್ಕೆ ನಿನ್ನನ್ನು ಹುಡುಕುತ್ತಿರಬಹುದು ಎಲ್ಲಿ ನಮ್ಮ ಗೆಳೆಯ ಹೋದನೆಂದು ತುಂಬಿದ ಕೊಡ ತುಳುಕುವುದಿಲ್ಲ ಎಂದು ಗಾದೆ ಮಾತು ಕೇಳಸಿಗುವಾಗೆಲ್ಲ ನಿನ್ನ ನೆನಪಾಗುವುದು, ನೀನು ಸಾಮಾನ್ಯದವನಾಗಿರಲಿಲ್...